ಶ್ರೀ ಹುಲಿಗೆಮ್ಮದೇವಿಯ
2025ನೇ ಸಾಲಿನ ಜಾತ್ರಾ ಮಹೋತ್ಸವಕ್ಕೆ
ಹಾರ್ದಿಕ ಸುಸ್ವಾಗತ
ಆದಿಶಕ್ತಿಯಾಗಿ, ಭವಾನಿಯಾಗಿ, ಭೀಮೆಯಾಗಿ, ಹೇಮಾವತಿಯಾಗಿ, ಚಂಡಿಯಾಗಿ, ಚಾಮುಂಡಿಯಾಗಿ, ಅಂಬೆಯಾಗಿ, ಜಗಧಾರಿಣಿಯಾಗಿ, ಅನ್ನಪೂರ್ಣೆಯಾಗಿ, ಶಾಕಂಬರಿಯಾಗಿ ಅನೇಕ ರೂಪಗಳನ್ನು ತಾಳಿ ಅವರವರ ಭಾವನೆಗಳಿಗೆ ತಕ್ಕಂತೆ ಪೂಜೆಗೊಳ್ಳುತ್ತಿರುವ ಆ ಅನಂತ ಶಕ್ತಿಯೇ ಶ್ರೀ ದೇವಿ ಹುಲಿಗೆಮ್ಮ ತಾಯಿಯ ಜಾತ್ರೆಗೆ ಸರ್ವರಿಗು ಹಾರ್ದಿಕ ಸುಸ್ವಾಗತ
ಶ್ರೀ ಹುಲಿಗಿ ರೇಣುಕಾಂಬಾ /
ಶ್ರೀ ಹುಲಿಗೆಮ್ಮದೇವಿಯ ದೇವಾಲಯದ ಇತಿಹಾಸ
ತುಂಗಭದ್ರಾ ನದಿ ತಟಾಕದಲ್ಲಿರುವ ಈ ಕ್ಷೇತ್ರಕ್ಕೆ ಶತಮಾನಗಳ ಇತಿಹಾಸವಿದೆ. ಕನ್ನಡನಾಡಿನ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಪ್ರಖ್ಯಾತವಾದ ಕ್ಷೇತ್ರ ಹುಲಗಿ. ವ್ಯಾಘ್ರಪುರಿ ಎಂದು ಸಂಸ್ಕೃತ ಸಾಹಿತ್ಯದಲ್ಲಿ ರೂಡಿಯಲ್ಲಿರುವುದು.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ, ಇದು ಹುಲಿಗಿ (ಮುನಿರಾಬಾದ್) ಎಂಬ ಹಳ್ಳಿಯಲ್ಲಿರುವ ಶ್ರೀ ರೇಣುಕಾ ಯೆಲ್ಲಮ್ಮ ದೇವಿಯ ರೂಪವಾದ ಶಕ್ತಿ ಕ್ಷೇತ್ರವಾಗಿದ್ದು, ಶ್ರೀ ಹುಲಿಗೆಮ್ಮ ದೇವಿ ಎಂಬ ನಾಮಾಂಕಿತದಿಂದ ಪ್ರಸಿದ್ಧವಾಗಿದೆ. ಇದು 13 ನೇ ಶತಮಾನದ ದೇವಾಲಯವಾಗಿದೆ. ಈ ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಭವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ
ಶ್ರೀ ದೇವಿಯ ಜರಗುವ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ದೇವಿಯ ದರ್ಶನ ಪಡೆದು ಪುನಿತರಾಗಬೇಕೆಂದು ಭಕ್ತಾದಿಗಳಲ್ಲಿ ವಿನಂತಿ.
ಪ್ರತಿನಿತ್ಯ ಜರಗುವ ಸಂಪುರ್ಣ ಕಾರ್ಯಕ್ರಮಗಳ ವಿವರಗಳಿಗಾಗಿ ಈ ಕೆಳಗೆ ಒತ್ತಿರಿ/ಕ್ಲಿಕ್ ಮಾಡಿ
ದೇವಸ್ಥಾನದಲ್ಲಿನ ವಿಶೇಷ ಸೌಲಭ್ಯಗಳ ಮಾಹಿತಿ
ಜಾತ್ರೆಯಲ್ಲಿ ಭಕ್ತರಿಗೆ ಉಪಯುಕ್ತವಾಗುವ ಎಲ್ಲ ಸೌಲಭ್ಯಗಳ ಮಾಹಿತಿಗಾಗಿ ಕೆಳಗಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಜಾತ್ರಾ ವಿಶೇಷವಾಗಿ ಮಂಗಳಾರತಿ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಸೇವಗಳು ಮಾತ್ರ ಲಭ್ಯವಿರುತ್ತವೆ.
-:ವಿಶೇಷ ಸೂಚನೆ:-
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ರೈಲ್ವೆ ಮುಖಾಂತರ ಬರತಕ್ಕ ಭಕ್ತಾದಿಗಳು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಬರಬೇಕೆಂದು ವಿನಂತಿಸಲಾಗಿದೆ.
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೊಸ್ಕರ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
- ದೇವಸ್ಥಾನದಲ್ಲಿ ಭಕ್ತಾದಿಗಳಿಗೊಸ್ಕರ ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದವನ್ನು ದಾಸೋಹ ಭವನದಲ್ಲಿ ವ್ಯವಸ್ಥೆ ಇರುತ್ತದೆ.
- ಭಕ್ತಾಧಿಗಳು ಅನ್ನ ದಾಸೋಹ ಸೇವೆ ಮಾಡಲು ಇಚ್ಛಿಸುವವರು ಸಾಮಾನ್ಯ ದಿನ - ರೂ. 11,000/- ಮಂಗಳವಾರ/ ಶುಕ್ರವಾರ ರೂ. 30,000/- ಹುಣ್ಣಿಮೆದಿನದಂದು – ರೂ. 99,000/- ಗಳ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆಯಬೇಕೆಂದು ವಿನಂತಿಸಲಾಗಿದೆ.
- ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನು ಮನದಿಂದ ದೇಣಿಗೆ ನೀಡಲು ಕೋರಿದೆ.
- ಶ್ರೀ ದೇವಿಗೆ ಸಲ್ಲಿಸುವ ಮುಡುಪು, ಕಾಣಿಕೆ, ಬೆಳ್ಳಿ, ಬಂಗಾರ ಹಾಗೂ ದವಸ ದಾನ್ಯಗಳನ್ನು ದೇವಸ್ಥಾನದ ಕಛೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿ ನಿಧಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ಶ್ರೀ ದೇವಿಯ ನಿಧಿಗೆ ಸೇರುವುದಿಲ್ಲ.
- ಪ್ರಾಣಿಬಲಿ ನಿಷೇಧ ಕಾಯಿದೆ 1959 ಮತ್ತು 1963ರ ಪ್ರಕಾರ ಪ್ರಾಣಿಬಲಿಯನ್ನು ನಿಷೇಧಿಸಿದೆ. ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು.
- ದೇವಸ್ತಾನದ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿದೆ.
- ಮೇಲಿನಂತೆ ಜರುಗುವ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.



