ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ 2025

ಜಾತ್ರೆಯ ಕಾರ್ಯಕ್ರಮಗಳು​

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ
ಜಾತ್ರಾ ಮಹೋತ್ಸವದ ವಿಷೇಶತೆ

ಭಕ್ತರೇ, ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತೇವೆ!

ಪ್ರತಿವರ್ಷವು ಭರತ/ಭಾರತ ಹುಣ್ಣಿಮೆಯ ಒಂಭತ್ತು ದಿನಗಳ ನಂತರ ಇಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಕೊಪ್ಪಳದಿಂದಷ್ಟೇ ಅಲ್ಲದೆ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ, ಹಾಗು ಹೋರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ ದಿಂದ ಸಾಕಷ್ಟು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.

ಈ ಜಾತ್ರೆಯ ವಿಶೇಷತೆ ಏನೆಂದರೆ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಹೊರಗಡೆ ಬಯಲಿನಲ್ಲಿ ಪಾಯಸವನ್ನು ಮಾಡಲಾಗುತ್ತದೆ. ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇಲ್ಲಿನ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಆದರೆ ಕಾರ್ಯಕ್ರಮ, ಪೂಜಾ ವಿಧಾನಗಳು 10 ದಿನಗಳ ವರೆಗೆ ನಡೆಯುತ್ತದೆ.

ವಿಜಯದಶಮಿಯಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇದಲ್ಲದೆ ಹುಣ್ಣಿಮೆ, ಮಂಗಳವಾರ, ಶುಕ್ರವಾರದಂದು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರಕ್ಕೆ ಸುಮಾರು ಎಂಟು ನೂರು ವರ್ಷಗಳ ಇತಿಹಾಸ ಇದೆ. ಪ್ರತಿ ವರ್ಷದಂತೆ 2025 ಸಾಲಿನ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ತಾವೆಲ್ಲರು ಭಾಗವಹಿಸಿ ಪುನಿತರಾಗಿ.
 

ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ

 ಕಂಕಣಧಾರಣೆ – ಭಕ್ತಿಯಿಂದ ಆರಂಭಗೊಳ್ಳುವ ಜಾತ್ರೋತ್ಸವ
 ಭಕ್ತರೇ,
 ವೈಶಾಖ ಬ॥ ಪ್ರತಿಪದ 13-05-2025 (ಮಂಗಳವಾರ) ರಂದು ರಾತ್ರಿ 8:00 ಗಂಟೆಗೆ ಶ್ರೀ ಹುಲಿಗೆಮ್ಮ ದೇವಿಯವರಿಗೆ ಕಂಕಣಧಾರಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ.   ಇದು ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವಾಗುತ್ತದೆ.

📅 ದಿನಾಂಕ: 13-05-2025 (ಮಂಗಳವಾರ)
🕗 ಸಮಯ: ರಾತ್ರಿ 8:00 ಗಂಟೆಗೆ
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ

ಈ ದೈವಿಕ ಕ್ಷಣದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಸಮೇತ  ಭಕ್ತಿಭಾವದಿಂದ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆದುಕೊಳ್ಳಿ. ಈ ಉತ್ಸವಕ್ಕೆ ನಿಮ್ಮನ್ನು ಆಹ್ವಾನಿಸುತ್ತೇವೆ

ಭಕ್ತಾದಿಗಳೆ,
ನೀವು ಮತ್ತು ನಿಮ್ಮ ಕುಟುಂಬದವರನ್ನು ಅಮ್ಮನವರ ಉತ್ಸವಕ್ಕೆ ಹಾರ್ದಿಕವಾಗಿ ಆಹ್ವಾನಿಸುತ್ತೇವೆ. ಈ ಪವಿತ್ರ ಸಂಧರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ವಿಶೇಷ ಅಲಂಕಾರ, ಆರತಿ ಮತ್ತು ಸಂಜೆಯ ಭಕ್ತಿಮಯ ಕಾರ್ಯಕ್ರಮಗಳು ನಡೆಯಲಿವೆ.

📅 ದಿನಾಂಕ: 20-05-2025 (ಮಂಗಳವಾರ)
🕖 ಸಮಯ: ಸಂಜೆ 7:00 ರಿಂದ
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ

ಈ ಸಂದರ್ಭದಲ್ಲಿ ದೇವಿಯ ಕೃಪೆಯನ್ನು ಪಡೆಯಲು ನಿಮಗೂ ನಿಮ್ಮ ಕುಟುಂಬಕ್ಕೂ ಇದೊಂದು ಅಪರೂಪದ ಅವಕಾಶ. ದಯವಿಟ್ಟು ಸಮಯಕ್ಕೆ ಆಗಮಿಸಿ.

 ಭಕ್ತಾದಿಗಳೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಭಾಗವಾಗಿ, ಈ ಪವಿತ್ರ ದಿನದಂದು ಅಕ್ಕಿಪಡಿ , ಮಹಾ ರಥೋತ್ಸವ ಜರುಗಲಿದೆ. ಶ್ರೀದೇವಿಯನ್ನು ಅಲಂಕಾರಿತ ರಥದಲ್ಲಿ  ಭಕ್ತರ ಸಮ್ಮುಖದಲ್ಲಿ ವಿಕ್ಷಣೆ ಮಾಡಲು ಇದು ದೈವಿಕ ಕ್ಷಣವಾಗಿರುತ್ತದೆ.

📅 ದಿನಾಂಕ: 21-05-2025 (ಬುಧವಾರ)
🕔 ಸಮಯ: ಸಂಜೆ 5:30 ರಿಂದ
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ

ಅಮ್ಮನವರ ಪಾದಸ್ಪರ್ಶ ಕೃಪೆಯಿಂದ ಸುರಿಮಳೆ ಹರಿದು ಬರುವಾಗ, ನೀವು ಕುಟುಂಬದೊಂದಿಗೆ ಈ ದೈವಿಕ ಕ್ಷಣಕ್ಕೆ ಸಾಕ್ಷಿಯಾಗಿರಿ. ಭಕ್ತಿಭಾವದಿಂದ ಆಗಮಿಸಿ, ಶ್ರದ್ಧೆಯಿಂದ ಭಾಗವಹಿಸಿ.

ಭಕ್ತರೇ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಅತ್ಯಂತ ಪವಿತ್ರ ದಿನಗಳಲ್ಲಿ ಒಂದು – 22-05-2025 (ಗುರುವಾರ). ಈ ದಿನ ವಿಶೇಷವಾಗಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

📅 ದಿನಾಂಕ: 22-05-2025 (ಗುರುವಾರ)
 ಕೊಂಡದ ಪೂಜಾ: ರಾತ್ರಿ 8:00 ಗಂಟೆಗೆ
 ಗಂಗಾದೇವಿ ಪೂಜಾ: ಬೆಳಗಿನ ಜಾವ 3:30ಕ್ಕೆ (ಬ್ರಾಹ್ಮಿ ಮುಹೂರ್ತದಲ್ಲಿ)
 ಶ್ರೀ ದೇವಿಗೆ ಪ್ರಸಾದ ಕೇಳುವುದು: ಬೆಳಗಿನ ಜಾವ 4:00 ಗಂಟೆಗೆ (ಬ್ರಾಹ್ಮಿ ಮುಹೂರ್ತದಲ್ಲಿ)
 ಬಾಳೆದಂಡಿಗೆ ಆರೋಹಣ: ಬೆಳಗಿನ ಜಾವ 4:30 ಗಂಟೆಗೆ (ಬ್ರಾಹ್ಮಿ ಮುಹೂರ್ತದಲ್ಲಿ)

ಈ ಎಲ್ಲಾ ವಿಧಿವಿಧಾನಗಳು ಶ್ರದ್ಧೆ, ಭಕ್ತಿ ಹಾಗೂ ಪಾವನತೆಯಿಂದ ನಡೆಯುತ್ತವೆ. ಈ ದಿವ್ಯ ಸಮಯದಲ್ಲಿ ಭಾಗವಹಿಸಿ, ದೇವಿಯ ಅನುಗ್ರಹವನ್ನು ಸಂಪಾದಿಸಿ.

 ಭಕ್ತರೇ,
 23-05-2025 ರಂದು ನಡೆಯುವ ವೈಶಾಖ ಬ॥ ಏಕಾದಶಿ  ಶುಕ್ರವಾರ ದಿನ ಭಕ್ತಿಭಾವದಿಂದ ತುಂಬಿರುವ ಅನೇಕ ದೈವಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪವಿತ್ರ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹವನ್ನು ಪಡೆಯಿರಿ.

📅 ದಿನಾಂಕ: 23-05-2025 (ಶುಕ್ರವಾರ)

 ಕೊಂಡದ ಪೂಜಾ – ರಾತ್ರಿ 8:00 ಗಂಟೆಗೆ
 ಹಿಡಿದಕ್ಷಿಣೆ ವಿತರಣೆ – ರಾತ್ರಿ 9:00 ಗಂಟೆಗೆ
 ಪಡಗದ ಪೂಜಾ – ರಾತ್ರಿ 9:30 ಗಂಟೆಗೆ ಸಾರಂಗಮಠದಲ್ಲಿ
 ಗಂಗಾದೇವಿ ಪೂಜಾ – ಬೆಳಗಿನ ಜಾವ 4:00 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)
 ಶ್ರೀ ದೇವಿಗೆ ಪ್ರಸಾದ ಕೇಳುವುದು – ಬೆಳಗಿನ ಜಾವ 4:30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)
 ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ – ಬೆಳಗಿನ ಜಾವ ದ್ವಾದಶ 5:30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)

ಇದು ನಂಬಿಕೆ, ಶ್ರದ್ಧೆ ಮತ್ತು ಶುದ್ಧ ಭಕ್ತಿಯ ದಿನ. ಈ ಮಹತ್ವಪೂರ್ಣ ಕ್ಷಣಗಳಲ್ಲಿ ನೀವು ಸಹ ಕುಟುಂಬದೊಂದಿಗೆ ಭಾಗವಹಿಸಿ, ಪವಿತ್ರತೆಯನ್ನು ಅನುಭವಿಸಿ.

ಪ್ರಿಯ ಭಕ್ತಮಿತ್ರರೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಅಂಗವಾಗಿ, ದಿನಾಂಕ: 24-05-2025 (ಶನಿವಾರ) ರಂದು ದ್ವಾದಶಿ ನಸುಕಿನಲ್ಲಿ ಅಗ್ನಿಕುಂಡ ಪೂಜೆ ಜರುಗಲಿದೆ. ಶುದ್ಧತಾ ಯಜ್ಞವಾಗಿ ಬೆಳಗಿನ ಶುಭ ಮುಹೂರ್ತದಲ್ಲಿ ಅಗ್ನಿಕುಂಡದಲ್ಲಿ ಹವನ ಕಾರ್ಯಕ್ರಮ ನಡೆಯುತ್ತದೆ.

📅 ದಿನಾಂಕ: 24-05-2025 (ಶನಿವಾರ)
🕡 ಸಮಯ: ಬೆಳಗಿನ ಜಾವ 6:30 ಗಂಟೆಗೆ (ದ್ವಾದಶಿ ನಸುಕಿನಲ್ಲಿ)
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ

ಈ ಪವಿತ್ರ ಯಜ್ಞದಲ್ಲಿ ಭಾಗವಹಿಸಿ, ಆತ್ಮಶುದ್ಧಿ ಮತ್ತು ದೇವಿಯ ಕೃಪೆಯನ್ನು ಪಡೆದುಕೊಳ್ಳಿ. ನಿಮ್ಮೆಲ್ಲರ ಉಪಸ್ಥಿತಿಗೆ ನಮ್ಮ ಆತ್ಮೀಯ ಸ್ವಾಗತ.

ಪ್ರಿಯ ಭಕ್ತಮಿತ್ರರೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಸಮಾರೋಪದ ಅಂಗವಾಗಿ, 17-06-2025 (ಮಂಗಳವಾರ) ರಂದು ರಾತ್ರಿ 8:00 ಗಂಟೆಗೆ ಶ್ರೀ ದೇವಿಯವರ ಕಂಕಣ ವಿಸರ್ಜನಾ ಕಾರ್ಯವು ಶ್ರದ್ಧಾ ಭಕ್ತಿಗಳಿಂದ ನೆರವೇರಲಿದೆ.

📅 ದಿನಾಂಕ: 17-06-2025 (ಮಂಗಳವಾರ)
🕗 ಸಮಯ: ರಾತ್ರಿ 8:00 ಗಂಟೆಗೆ
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ

ಈ ಪವಿತ್ರ ಸಮಾರಂಭದಲ್ಲಿ ಭಾಗವಹಿಸಿ, ಅಮೃತ ಅನುಭವವನ್ನು ಪಡೆದು ದೇವಿಯ ಕೃಪೆಗೆ ಪಾತ್ರರಾಗಿರಿ. ಈ ದೈವಿಕ ಕ್ಷಣಕ್ಕೆ ನಿಮ್ಮನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತೇವೆ

-:ವಿಶೇಷ ಸೂಚನೆ:-

ದೇವಸ್ಥಾನದಲ್ಲಿನ ವಿಶೇಷ ಸೌಲಭ್ಯಗಳ ಮಾಹಿತಿ

ಜಾತ್ರೆಯಲ್ಲಿ ಭಕ್ತರಿಗೆ ಉಪಯುಕ್ತವಾಗುವ ಎಲ್ಲ ಸೌಲಭ್ಯಗಳ ಮಾಹಿತಿಗಾಗಿ ಕೆಳಗಿನ ಬಾಕ್ಸ್‌ ಮೇಲೆ ಕ್ಲಿಕ್ ಮಾಡಿ.

ವಿಶೇಷ ಬಸ್ಸುಗಳ/ ವಾಹನಗಳ ವ್ಯವಸ್ತೆ

ವಾಹನ ನಿಲುಗಡೆ
ವ್ಯವಸ್ತೆ

ಅನ್ನ ದಾಸೋಹ ಭವನ/ ಪ್ರಸಾದದ ವ್ಯವಸ್ತೆ

ವಸತಿ ಗೃಹ /
ಕೊಠಡಿ ವ್ಯವಸ್ತೆ

ಸಾರ್ವಜನಿಕ ಶೌಚಾಲಯ ವ್ಯವಸ್ತೆ

ವೈದ್ಯಕೀಯ ಮತ್ತು
ತುರ್ತು ಸೇವೆಗಳು

ಪೊಲೀಸ್ / ಆರಕ್ಷಕ ಸಿಬ್ಬಂದಿ ವ್ಯವಸ್ತೆ

ದೇವಾಲಯದ
ಮಾಹಿತಿ ಕೇಂದ್ರ