ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ
ದೇವಾಲಯದ
ಮಾಹಿತಿ ಕೇಂದ್ರ
ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಶ್ರೀ ಕ್ಷೇತ್ರ ಹುಲಗಿ - 583234 ತಾ: ಜಿ: ಕೊಪ್ಪಳ
ಭಕ್ತರೇ, ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತೇವೆ!
ಪ್ರತಿವರ್ಷದಂತೆ ಈ ವರ್ಷವು ನಡೆಯುತ್ತಿರುವ ಅತಿ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಕೊಪ್ಪಳದಿಂದಷ್ಟೇ ಅಲ್ಲದೆ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ, ಹಾಗು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ ಮಹಾರಾಷ್ಟ್ರ ದಿಂದ ಸಾಕಷ್ಟು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
ಈ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳವುದರಿಂದ ಎಲ್ಲ ಭಕ್ತಾಧಿಗಳಿಗೂ ಮತ್ತು ಹೊಸ ಭಕ್ತಾಧಿಗಳಿಗೂ ದೇವಾಲಯದಲ್ಲಿನ ಸಂಪೂರ್ಣ ಮಾಹಿತಿ ದೊರೆಯದೆ ಇದ್ದ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ
81510-16891, 80958-64999, 90358-59035
ಯಂ. ಹೆಚ್. ಪ್ರಕಾಶ್ರಾವ್
ಕಾರ್ಯದರ್ಶಿಗಳು, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಶ್ರೀ ಕ್ಷೇತ್ರ ಹುಲಗಿ, ತಾ: ಜಿ: ಕೊಪ್ಪಳ
ನಲಿನ್ ಅತುಲ್
ಜಿಲ್ಲಾಧಿಕಾರಿಗಳು,
ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ
ಸರ್ವರಿಗೂ ಆದರದ ಸುಸ್ವಾಗತ
ಹುಲಗಿಯ ಗ್ರಾಮಸ್ಥರು ಹಾಗೂ ಸದ್ಭಕ್ತರು
-:ವಿಶೇಷ ಸೂಚನೆ:-
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ರೈಲ್ವೆ ಮುಖಾಂತರ ಬರತಕ್ಕ ಭಕ್ತಾದಿಗಳು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಬರಬೇಕೆಂದು ವಿನಂತಿಸಲಾಗಿದೆ.
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೊಸ್ಕರ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
- ದೇವಸ್ಥಾನದಲ್ಲಿ ಭಕ್ತಾದಿಗಳಿಗೊಸ್ಕರ ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದವನ್ನು ದಾಸೋಹ ಭವನದಲ್ಲಿ ವ್ಯವಸ್ಥೆ ಇರುತ್ತದೆ.
- ಭಕ್ತಾಧಿಗಳು ಅನ್ನ ದಾಸೋಹ ಸೇವೆ ಮಾಡಲು ಇಚ್ಛಿಸುವವರು ಸಾಮಾನ್ಯ ದಿನ - ರೂ. 11,000/- ಮಂಗಳವಾರ/ ಶುಕ್ರವಾರ ರೂ. 30,000/- ಹುಣ್ಣಿಮೆದಿನದಂದು – ರೂ. 99,000/- ಗಳ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆಯಬೇಕೆಂದು ವಿನಂತಿಸಲಾಗಿದೆ.
- ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನು ಮನದಿಂದ ದೇಣಿಗೆ ನೀಡಲು ಕೋರಿದೆ.
- ಶ್ರೀ ದೇವಿಗೆ ಸಲ್ಲಿಸುವ ಮುಡುಪು, ಕಾಣಿಕೆ, ಬೆಳ್ಳಿ, ಬಂಗಾರ ಹಾಗೂ ದವಸ ದಾನ್ಯಗಳನ್ನು ದೇವಸ್ಥಾನದ ಕಛೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿ ನಿಧಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ಶ್ರೀ ದೇವಿಯ ನಿಧಿಗೆ ಸೇರುವುದಿಲ್ಲ.
- ಪ್ರಾಣಿಬಲಿ ನಿಷೇಧ ಕಾಯಿದೆ 1959 ಮತ್ತು 1963ರ ಪ್ರಕಾರ ಪ್ರಾಣಿಬಲಿಯನ್ನು ನಿಷೇಧಿಸಿದೆ. ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು.
- ದೇವಸ್ತಾನದ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿದೆ.
- ಮೇಲಿನಂತೆ ಜರುಗುವ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
