ಆರೋಗ್ಯವೇ ನಿಜವಾದ ಸಂಪತ್ತು ಮತ್ತು ಭಾಗ್ಯ. ಇದನ್ನು ನೆನಪಿನಲ್ಲಿಟ್ಟುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ನಿಮ್ಮ ಆರೋಗ್ಯ, ಶುಚ್ಚಿತ್ವ ನಮ್ಮ ಆದ್ಯತೆ ಶುಧ್ಧ ಕುಡಿಯುವ ನೀರಿನ ಸೇವೆಗಳುನ್ನು ಒದಗಿಸುವ ಉದ್ದೇಶದಿಂದ ದೇವಸ್ಥಾನ ಆವರಣದಲ್ಲಿ ಮತ್ತು ಎಲ್ಲಾ ವಾಹನ ನಿಲ್ದಾಣಗಳಲ್ಲಿ ವ್ಯವಸ್ಥೆಮಾಡಲಾಗಿದೆ.
ಸುರಕ್ಷತಾ ಸೂಚನೆಗಳು
- ಸದಾ ಸ್ವಚ್ಛವಾದ ನೀರನ್ನು ಕುಡಿಯಿರಿ.
- ಹೊಟ್ಟೆ ತುಂಬಾ ಉಪವಾಸ ಇರಬೇಡಿ. ಸಮಯಕ್ಕೆ ಆಹಾರ ಸೇವಿಸಿ.
- ಹೆಚ್ಚು ಧೂಪ, ಬೇಗೆಯಲ್ಲಿರುವುದನ್ನು ತಪ್ಪಿಸಿ.
- ತೀವ್ರ ತಲೆನೋವು, ವಾಂತಿ, ದಪ್ಪತನ ಕಂಡಾಗ ತಕ್ಷಣ ವೈದ್ಯಕೀಯ ಶಿಬಿರಕ್ಕೆ ಹೋಗಿ.
- ಅಗತ್ಯವಿಲ್ಲದಿದ್ದರೆ ಭಾರೀ ಜನಸಂದಣಿ ಪ್ರದೇಶದಲ್ಲಿ ಹೆಚ್ಚು ಕಾಲ ನಿಲ್ಲಬೇಡಿ.
- ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.
- ತುರ್ತು ಸ್ಥಿತಿಯಲ್ಲಿ ತಕ್ಷಣ ಕಂಟ್ರೋಲ್ ರೂಮ್ ಅಥವಾ ಆಂಬ್ಯುಲೆನ್ಸ್ ಅನ್ನು ಸಂಪರ್ಕಿಸಿ.
- ಶುಚಿತ್ವ ಕಾಪಾಡಿ: ಪ್ರಸಾದ ಸ್ಥಳದ ಸುತ್ತಮುತ್ತ ಮತ್ತು ಬಡಿಸುವಾಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
- ದೇವಸ್ಥಾನದಲ್ಲಿ ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನ ದಾಸೋಹ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾಧಿಗಳು ದಾಸೋಹ ಸೇವೆ ಮಾಡಲು ಇಚ್ಛಿಸುವವರು ಸಾಮಾನ್ಯ ದಿನ - ರೂ. 11,000/- ಮಂಗಳವಾರ/ ಶುಕ್ರವಾರ ರೂ. 30,000/- ಹುಣ್ಣಿಮೆದಿನದಂದು – ರೂ. 99,000/- ಗಳ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆಯಬೇಕೆಂದು ವಿನಂತಿಸಲಾಗಿದೆ.
- ಸ್ವಯಂಸೇವಕರೊಂದಿಗೆ ಸಹಕರಿಸಿ, ಸೇವೆ ಮಾಡುತ್ತಿರುವ ಸ್ವಯಂಸೇವಕರೊಂದಿಗೆ ಸೌಜನ್ಯದಿಂದ ವರ್ತಿಸಿ ಮತ್ತು ಅವರಿಗೆ ಸಹಕರಿಸಿ.
- ವ್ಯವಸ್ಥಾಪಕರ ಸೂಚನೆ ಪಾಲಿಸಿ: ಪ್ರಸಾದ ವ್ಯವಸ್ಥಾಪಕರು ಅಥವಾ ಸ್ವಯಂಸೇವಕರು ನೀಡುವ ಸೂಚನೆಗಳನ್ನು ದಯವಿಟ್ಟು ಪಾಲಿಸಿ. ಅವರು ಸುಗಮ ವಿತರಣೆಗಾಗಿ ಶ್ರಮಿಸುತ್ತಿರುತ್ತಾರೆ.
- ಪ್ರಾಣಿಬಲಿ ನಿಷೇಧ ಕಾಯಿದೆ 1959 ಮತ್ತು 1963ರ ಪ್ರಕಾರ ಪ್ರಾಣಿಬಲಿಯನ್ನು ನಿಷೇಧಿಸಿದೆ. ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು.
