ಶ್ರೀ ಹುಲಿಗೆಮ್ಮದೇವಿಯ ದೇವಾಲಯದ ಇತಿಹಾಸ

ಶ್ರೀ ಹುಲಗಿ ರೇಣುಕಾಂಬಾ /
ಶ್ರೀ ಹುಲಿಗೆಮ್ಮದೇವಿಯ ದೇವಾಲಯದ ಇತಿಹಾಸ

ತುಂಗಭದ್ರಾ ನದಿ ತಟಾಕದಲ್ಲಿರುವ ಈ ಕ್ಷೇತ್ರಕ್ಕೆ ಶತಮಾನಗಳ ಇತಿಹಾಸವಿದೆ. ಕನ್ನಡನಾಡಿನ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಪ್ರಖ್ಯಾತವಾದ ಕ್ಷೇತ್ರ ಹುಲಗಿ. ವ್ಯಾಘ್ರಪುರಿ ಎಂದು ಸಂಸ್ಕೃತ ಸಾಹಿತ್ಯದಲ್ಲಿ ರೂಡಿಯಲ್ಲಿರುವುದು.

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ, ಇದು ಹುಲಿಗಿ (ಮುನಿರಾಬಾದ್) ಎಂಬ ಹಳ್ಳಿಯಲ್ಲಿರುವ ಶ್ರೀ ರೇಣುಕಾ ಯೆಲ್ಲಮ್ಮ ದೇವಿಯ ರೂಪವಾದ ಶಕ್ತಿ ಕ್ಷೇತ್ರವಾಗಿದ್ದು, ಶ್ರೀ ಹುಲಿಗೆಮ್ಮ ದೇವಿ ಎಂಬ ನಾಮಾಂಕಿತದಿಂದ ಪ್ರಸಿದ್ಧವಾಗಿದೆ. ಇದು 13 ನೇ ಶತಮಾನದ ದೇವಾಲಯವಾಗಿದೆ. ಈ ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಭವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.

ಕಾಮಕಾಯಾನ ಗೋತ್ರಜರಾದ ವೇದ ಬ್ರಹ್ಮ ಶ್ರೀ ಚತುರ್ವೇದಿ ಭಟ್ಟರು ಮತ್ತು ಗ್ರಾಮಸ್ಥರ ಸಹಾಯದ ನೇರವಿನಿಂದ ತುಂಗಭದ್ರಾ ನದಿಗೆ ಅಡ್ಡಗೋಡೆ ನಿರ್ಮಿಸಿ, ಕಾಲುವೆ ತೋಡಿ ಈ ಸುತ್ತ ಮುತ್ತಲಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಗೊಳಿಸಿದರು. ಚಾಲುಕ್ಯ ವಿಕ್ರಮ ಶಕೆ  13ರಲ್ಲಿ ಅಂದಿನ ಆಳರಸರು ಈ ಕಾರ್ಯಕ್ಕೆ ಮೆಚ್ಚಿ ಅವರಿಗೆ 

ಸೋಮನಾಥ ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಐತಿಹಾಸಿಕ ಘಟನೆಯ ವಿವರವನ್ನು ಸಾರಿ ಹೇಳುವ ಶಿಲಾಶಾಸನವು ದೇವಾಲಯದಲ್ಲೆ ದೊರೆತಿದೆ. ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ ಉಡುಗೊರೆಯಾಗಿ ನೀಡಿದ್ದರು. 

ಇದೇ ಗ್ರಾಮ ನಿವಾಸಿಗಳಾದ ನಾಗಜೋಗಿ ಮತ್ತು ಬಸವಜೋಗಿ ಎಂಬುವರು ಅವರ ಪೂರ್ವಜರು ಸವದತ್ತಿಯ ದೇವಿ ಯಲ್ಲಮ್ಮನಿಗೆ ಪ್ರತಿ ವರ್ಷವೂ ಹೋಗಿ ಪೂಜಾದಿಗಳನ್ನು ನೇರವೇರಿಸಿ ದರ್ಶನ ಪಡೆದುಕೊಂಡು ಬರುತ್ತಿದ್ದರು. ನಾಗಜೋಗಿ ಮತ್ತು ಬಸವಜೋಗಿ ಅವರು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಸೋಮನಾಥ ಭಟ್ಟರ ಮಾರ್ಗದರ್ಶನದಲ್ಲಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು.

  ಧಾರ್ಮಿಕ ಸಂಪ್ರದಾಯಕ್ಕೆ ಶ್ರೀ ದೇವಿ ಎಲ್ಲಮ್ಮನಲ್ಲಿ ವಿಶೇಷ ಶ್ರಧ್ಧೆ ಹಾಗೂ ಅನನ್ಯ ಭಕ್ತಿ ಉಳ್ಳವರಾದ  ನಾಗಜೋಗಿ ಮತ್ತು ಬಸವಜೋಗಿಯವರು ಸೋಮನಾಥ ಭಟ್ಟರ ವೇದಾಂತ ಪೂರಿತ ಉಪದೇಶ ಪರಿಪಕ್ವತೆಯನ್ನು ಹೊಂದಿ ಮತ್ತು ಅವರ ಭಕ್ತಿಯ ಮಹಾ ಪರಾಕಾಷ್ಟತೆಯ ಪ್ರತಿ ಫಲವೆ ಶ್ರೀ ದೇವಿ ಹುಲಿಗೆಮ್ಮನ ಅವತಾರಕ್ಕೆ ಕಾರಣವಾಯಿತು.

ಕೆಲವು ವರ್ಷಗಳ ನಂತರ ನಾಗಜೋಗಿ ಮತ್ತು ಬಸವಜೋಗಿಯವರು ವಾಡಿಕೆಯಂತೆ ಪೂರ್ಣಿಮೆಯ ದರ್ಶನಕ್ಕಾಗಿ ಸೋಮನಾಥ ಭಟ್ಟರ ಮಾರ್ಗದರ್ಶನದಲ್ಲಿ ಎಲ್ಲಮನ ಗುಡ್ಡಕ್ಕೆ ದೇವಿಯ ದರ್ಶನಕ್ಕೆ ಉಧೋ ಉಧೋ ಎನ್ನುತ್ತ ಪ್ರವಾಸ ಆರಂಭಿಸಿದರು. ಇಬ್ಬರು ಭಕ್ತರು ಸವದತ್ತಿ ಹತ್ತಿರ ಮಲಪ್ರಭಾ ನದಿ ತೀರವನ್ನು ತಲುಪಿದರು. ಧಾರಕಾರವಾಗಿ ಸುರಿದ ಮಳೆಯ ಕಾರಣ ನದಿಯು ತುಂಬಿ ಹರಿಯುತಿದ್ದು ಪ್ರವಾಹ ಕಡಿಮೆಯಾಗಲೆಂದು ಭಕ್ತರಿಬ್ಬರು ನದಿಯ ಇನೊಂದು ದಡದಲ್ಲಿರುವ ಶ್ರೀ ದೇವಿ ಎಲ್ಲಮ್ಮನ ದರ್ಶನಕ್ಕಾಗಿ ಕಾದು ಕುಳಿತಿದ್ದರು ದಾರಿಯಲ್ಲಿ ತುಂಬಾ ಆಯಸವಾಗಿದ್ದರಿಂದ  ಸ್ವಲ್ಪ ಸಮಯದ ನಂತರ ಇಬ್ಬರು ನಿದ್ರೆಗೆ ಜಾರಿದರು. ಭಕ್ತರ ಶ್ರಧ್ಧೆ ಹಾಗೂ ಭಕ್ತಿಗೆ ಒಲಿದು ಕರುಣಾಮಯಿಯಾದ ಶ್ರೀ ದೇವಿ ಎಲ್ಲಮ್ಮ ತಾಯಿಯು ಅವರ ಕನಸಿನ್ನಲ್ಲಿ ಬಂದು ನನ್ನ ದರ್ಶನಕ್ಕಾಗಿ ನೀವು  ನಿಮ್ಮೂರಿನ ಶಿವಾಲಯದ ಪಶ್ಚಿಮ ತಾಣದಲ್ಲಿ ಹರಿಹರ ಬ್ರಹ್ಮಾದಿಗಳು ಪೂಜಿಸುವ ಶ್ರೀಚಕ್ರ ದೊರಕುವುದು ಸಾಲಿಗ್ರಾಮ ರೂಪದಲ್ಲಿ ನನ್ನ ಮೂಖವು ಗೋಚರಿಸುವುದು. ಅಲ್ಲಿಯೆ ಪೂಜಿಸಿರಿ ನಾನು ಅಲ್ಲಿ ನಾನು ನೆಲೆಸುವೆ ಎಂದು ಅಪ್ಪಣೆ ನೀಡುತ್ತಾಳೆ.

ಇಬ್ಬರು ಭಕ್ತರು ಹುಲಗಿ ಗ್ರಾಮಕ್ಕೆ ಹಿಂತಿರುಗಿ ನಡೆದ ವಿದ್ಯಮಾನಗಳನ್ನೆಲ್ಲ ತಮ್ಮ ಗುರುಗಳಾದ ಸೋಮನಾಥ ಭಟ್ಟರಿಗೆ ತಿಳಿಸುತ್ತರೆ ಅವರ  ಮಾರ್ಗದರ್ಶನಂತೆ ಶ್ರೀಚಕ್ರ ಹಾಗು ಸಾಲಿಗ್ರಾಮಗಳು ದೊರೆತ ಸ್ಥಳದಲ್ಲಿ ಶಾಸ್ತ್ರೋಕ್ತವಾಗಿ ವೇದ ಘೋಷಣೆಗಳೊಂದಿಗೆ ದೇವಾಲಯ ಮಾಡಿ ದೇವಿಯ ಪ್ರತಿಷ್ಟಾಪನೆ ಮಾಡಲಾಯಿತು. ಉರಿನ ಗ್ರಾಮಸ್ತರೆಲ್ಲರು ದೇವಿಯನ್ನು ತಾಯಿ ಸ್ವರೂಪದಂತೆ ಪೂಜಿಸತೊಡಗಿದರು ಮತ್ತು ಹುಲಿಗೆಮ್ಮ ತಾಯಿ ಹುಲಿಗೆಮ್ಮ ದೇವಿ ಎಂದು ಕರೆಯುವುದು ವಾಡಿಕೆಯಾಯಿತು. ಗುರುಗಳಾದ ಸೋಮನಾಥ ಭಟ್ಟರು ದೇವಿಯನ್ನು ನಿತ್ಯವೂ ಪೂಜಿಸುವ ಆರಾಧಿಸುವ ಹೊಣೆಹೊತ್ತುಕೊಂಡರು. ಪ್ರತಿ ಮಂಗಳವಾರ, ಶನಿವಾರ, ಪೂರ್ಣಿಮೆ ಮತ್ತು ಅಮವಾಸ್ಯೆ ದಿನಗಳಂದು ವಿಶೇಷ ಪೂಜಾಕಾರ್ಯಕ್ರಮ ದೇವಿಯವರ ಮಹಿಮೆಯನ್ನು ಪ್ರಸ್ತುತಪಡಿಸುವುದನ್ನು ಲೋಕ ಕಲ್ಯಾಣಕ್ಕಾಗಿ ಕೈಗೊಡರು.

ಶ್ರೀದೇವಿಯ ಮಹಿಮೆಯನ್ನು ಪವಾಡವನ್ನು ಸರ್ವ ಜನಾಂಗಕ್ಕು ತಿಳಿಸಬೇಕು ಮತ್ತು ಶ್ರೀದೇವಿ ವ್ರತಾಚರಣೆಯನ್ನು ಮಾಡಿ ಪುನಿತರಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಗುರುಗಳಾದ ಸೋಮನಾಥ ಭಟ್ಟರು ವೈಶಾಖ ಶುದ್ದ ಪೂರ್ಣಿಮೆಯಿಂದ ವ್ರತಾಚರಣೆ, ಪಾಯಸ ನೀವೆದನೆ, ಮತ್ತು ಅಗ್ನಿಕುಂಡದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಭಟ್ಟರ ಉಪದೇಶದಂತೆ ಅಷ್ಟಮಿಯಂದು ಶ್ರೀದೇವಿಯವರಿಗಿ ಸರ್ವಾಲಂಕಾರ ಮಾಡಿ ರತ್ಸೋತ್ಸವ ನಡೆಸಲಾಯಿತು. ನವಮಿಯ ರಾತ್ರಿಯಲ್ಲಿ ಬಾಳಿದಂಡಿಗೆ, ತಳಿರು ತೋರಣಗಳಿಂದ ದೇವಾಸ್ಥಾನವನ್ನು ಅಲಂಕೃತಗೊಳಿಸಲಾಯಿತು. ದ್ವಾಶಿಯ ಬ್ರಾಹ್ಮೀ ಮುಹೂರ್ತದಲ್ಲಿ ಹೊಸ ಮಡಿಕೆಯೊಂದರಲ್ಲಿ ಅನ್ನ ಪ್ರಸಾದವನ್ನು ಮಾಡಿ ನಾಗಜೋಗಿ ಮತ್ತು ಬಸವಜೋಗಿಯವರು ತಮ್ಮ ಕೈಗಳಿಂದ ಬಿಸಿ ಬಿಸಿ ಪ್ರಸಾದವನ್ನು ದೇವಿಗೆ ಅರ್ಪಿಸಿದರು ನಂತರ ಇಬ್ಬರು ಭಕ್ತರು ವ್ರತಾಚರಣೆಯ ಅಂತಿಮ ಕಾರ್ಯಕ್ರಮವಾಗಿ ದೇವಸ್ಥಾನದ ಆವರಣದಲ್ಲಿರುವ ಅಗ್ನಿಕುಂಡ ಹಾಯ್ದು ಶ್ರೀದೇವಿಯ ದೇವಾಲಯ ಪ್ರವೇಶ ಮಾಡಿದರು ಅಲ್ಲಿ ಸೇರಿದ್ದ ಜನರೆಲ್ಲರು ಉಲ್ಲಾಸ, ಉತ್ಸವದಿಂದ ಹರ್ಷೊದ್ಗಾರ ಘೋಷಣೆಗಳೊಂದಿಗೆ ಶ್ರೀ ದೇವಿಯನ್ನು ಆರಾಧಿಸುತ್ತಾ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸಿದರು. ಅದೇ ಇಂದಿಗೂ ಜೋಗ ಪಂಕ್ತಿ ಎಂದು ಕರೆಯಲಾಗುತ್ತದೆ. ಈ ವ್ರತಾಚರಣೆಯನ್ನು ಶ್ರೀ ದೇವಿ ಹುಲಿಗೆಮ್ಮನ ಜಾತ್ರೆಯಾಗಿ ಪ್ರತಿ ವರ್ಷವೂ ಗ್ರಾಮಸ್ಥರು ಮತ್ತು ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ಗುರುಗಳಾದ ಸೋಮನಾಥ ಭಟ್ಟರು ಹಾಕಿಕೊಟ್ಟ  ಮಾರ್ಗದಲ್ಲಿ ಭಕ್ತಿಯಿಂದ ಪೂಜಿಸಿ, ಭಜಿಸಿ ದೇವಿಯನ್ನು ಆರಾಧಿಸುತ್ತಾ ಯಾವುದೇ ಚ್ಯುತಿ ಬಾರದಂತೆ ಲೋಕ ಕಲ್ಯಾಣಕ್ಕಾಗಿ ಆಚರಣೆಯನ್ನು ಮನ್ನೆಡಿಸಿಕೊಂಡು ಬರುತ್ತಿದ್ದಾರೆ