ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ 2025
ಜಾತ್ರೆಯ ಕಾರ್ಯಕ್ರಮಗಳು
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ
ಜಾತ್ರಾ ಮಹೋತ್ಸವದ ವಿಷೇಶತೆ
ಭಕ್ತರೇ, ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತೇವೆ!
ಪ್ರತಿವರ್ಷವು ಭರತ/ಭಾರತ ಹುಣ್ಣಿಮೆಯ ಒಂಭತ್ತು ದಿನಗಳ ನಂತರ ಇಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಕೊಪ್ಪಳದಿಂದಷ್ಟೇ ಅಲ್ಲದೆ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ, ಹಾಗು ಹೋರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ ದಿಂದ ಸಾಕಷ್ಟು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
ಈ ಜಾತ್ರೆಯ ವಿಶೇಷತೆ ಏನೆಂದರೆ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಹೊರಗಡೆ ಬಯಲಿನಲ್ಲಿ ಪಾಯಸವನ್ನು ಮಾಡಲಾಗುತ್ತದೆ. ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇಲ್ಲಿನ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಆದರೆ ಕಾರ್ಯಕ್ರಮ, ಪೂಜಾ ವಿಧಾನಗಳು 10 ದಿನಗಳ ವರೆಗೆ ನಡೆಯುತ್ತದೆ.
ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ
ದಿನಾಂಕ 13-05-2025 🙏ಕಂಕಣಧಾರಣೆ
ಕಂಕಣಧಾರಣೆ – ಭಕ್ತಿಯಿಂದ ಆರಂಭಗೊಳ್ಳುವ ಜಾತ್ರೋತ್ಸವ
ಭಕ್ತರೇ,
ವೈಶಾಖ ಬ॥ ಪ್ರತಿಪದ 13-05-2025 (ಮಂಗಳವಾರ) ರಂದು ರಾತ್ರಿ 8:00 ಗಂಟೆಗೆ ಶ್ರೀ ಹುಲಿಗೆಮ್ಮ ದೇವಿಯವರಿಗೆ ಕಂಕಣಧಾರಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ. ಇದು ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವಾಗುತ್ತದೆ.
ದಿನಾಂಕ: 13-05-2025 (ಮಂಗಳವಾರ)
ಸಮಯ: ರಾತ್ರಿ 8:00 ಗಂಟೆಗೆ
ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
ಈ ದೈವಿಕ ಕ್ಷಣದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಸಮೇತ ಭಕ್ತಿಭಾವದಿಂದ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆದುಕೊಳ್ಳಿ. ಈ ಉತ್ಸವಕ್ಕೆ ನಿಮ್ಮನ್ನು ಆಹ್ವಾನಿಸುತ್ತೇವೆ
ದಿನಾಂಕ 20-05-2025 🙏 ಅಮ್ಮನವರ ಉತ್ಸವ – ಭಕ್ತರಿಗೂ ಹಾರ್ದಿಕ ಆಹ್ವಾನ
ಭಕ್ತಾದಿಗಳೆ,
ನೀವು ಮತ್ತು ನಿಮ್ಮ ಕುಟುಂಬದವರನ್ನು ಅಮ್ಮನವರ ಉತ್ಸವಕ್ಕೆ ಹಾರ್ದಿಕವಾಗಿ ಆಹ್ವಾನಿಸುತ್ತೇವೆ. ಈ ಪವಿತ್ರ ಸಂಧರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ವಿಶೇಷ ಅಲಂಕಾರ, ಆರತಿ ಮತ್ತು ಸಂಜೆಯ ಭಕ್ತಿಮಯ ಕಾರ್ಯಕ್ರಮಗಳು ನಡೆಯಲಿವೆ.
📅 ದಿನಾಂಕ: 20-05-2025 (ಮಂಗಳವಾರ)
🕖 ಸಮಯ: ಸಂಜೆ 7:00 ರಿಂದ
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
ಈ ಸಂದರ್ಭದಲ್ಲಿ ದೇವಿಯ ಕೃಪೆಯನ್ನು ಪಡೆಯಲು ನಿಮಗೂ ನಿಮ್ಮ ಕುಟುಂಬಕ್ಕೂ ಇದೊಂದು ಅಪರೂಪದ ಅವಕಾಶ. ದಯವಿಟ್ಟು ಸಮಯಕ್ಕೆ ಆಗಮಿಸಿ.
ದಿನಾಂಕ 21-05-2025 🙏 ಅಕ್ಕಿಪಡಿ ಮತ್ತು ಮಹಾ ರಥೋತ್ಸವ
ಭಕ್ತಾದಿಗಳೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಭಾಗವಾಗಿ, ಈ ಪವಿತ್ರ ದಿನದಂದು ಅಕ್ಕಿಪಡಿ , ಮಹಾ ರಥೋತ್ಸವ ಜರುಗಲಿದೆ. ಶ್ರೀದೇವಿಯನ್ನು ಅಲಂಕಾರಿತ ರಥದಲ್ಲಿ ಭಕ್ತರ ಸಮ್ಮುಖದಲ್ಲಿ ವಿಕ್ಷಣೆ ಮಾಡಲು ಇದು ದೈವಿಕ ಕ್ಷಣವಾಗಿರುತ್ತದೆ.
ದಿನಾಂಕ: 21-05-2025 (ಬುಧವಾರ)
ಸಮಯ: ಸಂಜೆ 5:30 ರಿಂದ
ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
ಅಮ್ಮನವರ ಪಾದಸ್ಪರ್ಶ ಕೃಪೆಯಿಂದ ಸುರಿಮಳೆ ಹರಿದು ಬರುವಾಗ, ನೀವು ಕುಟುಂಬದೊಂದಿಗೆ ಈ ದೈವಿಕ ಕ್ಷಣಕ್ಕೆ ಸಾಕ್ಷಿಯಾಗಿರಿ. ಭಕ್ತಿಭಾವದಿಂದ ಆಗಮಿಸಿ, ಶ್ರದ್ಧೆಯಿಂದ ಭಾಗವಹಿಸಿ.
ದಿನಾಂಕ 22-05-2025 🙏ಬಾಳೆದಂಡಿಗೆ ಮತ್ತು ಗಂಗಾದೇವಿ ಪೂಜಾ
ಭಕ್ತರೇ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಅತ್ಯಂತ ಪವಿತ್ರ ದಿನಗಳಲ್ಲಿ ಒಂದು – 22-05-2025 (ಗುರುವಾರ). ಈ ದಿನ ವಿಶೇಷವಾಗಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
ದಿನಾಂಕ: 22-05-2025 (ಗುರುವಾರ)
ಕೊಂಡದ ಪೂಜಾ: ರಾತ್ರಿ 8:00 ಗಂಟೆಗೆ
ಗಂಗಾದೇವಿ ಪೂಜಾ: ಬೆಳಗಿನ ಜಾವ 3:30ಕ್ಕೆ (ಬ್ರಾಹ್ಮಿ ಮುಹೂರ್ತದಲ್ಲಿ)
ಶ್ರೀ ದೇವಿಗೆ ಪ್ರಸಾದ ಕೇಳುವುದು: ಬೆಳಗಿನ ಜಾವ 4:00 ಗಂಟೆಗೆ (ಬ್ರಾಹ್ಮಿ ಮುಹೂರ್ತದಲ್ಲಿ)
ಬಾಳೆದಂಡಿಗೆ ಆರೋಹಣ: ಬೆಳಗಿನ ಜಾವ 4:30 ಗಂಟೆಗೆ (ಬ್ರಾಹ್ಮಿ ಮುಹೂರ್ತದಲ್ಲಿ)
ಈ ಎಲ್ಲಾ ವಿಧಿವಿಧಾನಗಳು ಶ್ರದ್ಧೆ, ಭಕ್ತಿ ಹಾಗೂ ಪಾವನತೆಯಿಂದ ನಡೆಯುತ್ತವೆ. ಈ ದಿವ್ಯ ಸಮಯದಲ್ಲಿ ಭಾಗವಹಿಸಿ, ದೇವಿಯ ಅನುಗ್ರಹವನ್ನು ಸಂಪಾದಿಸಿ.
ದಿನಾಂಕ 23-05-2025 🙏ಪಾಯಸ ಮತ್ತು ಅಗ್ನಿಕುಂಡ
ಭಕ್ತರೇ,
23-05-2025 ರಂದು ನಡೆಯುವ ವೈಶಾಖ ಬ॥ ಏಕಾದಶಿ ಶುಕ್ರವಾರ ದಿನ ಭಕ್ತಿಭಾವದಿಂದ ತುಂಬಿರುವ ಅನೇಕ ದೈವಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪವಿತ್ರ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹವನ್ನು ಪಡೆಯಿರಿ.
ದಿನಾಂಕ: 23-05-2025 (ಶುಕ್ರವಾರ)
ಕೊಂಡದ ಪೂಜಾ – ರಾತ್ರಿ 8:00 ಗಂಟೆಗೆ
ಹಿಡಿದಕ್ಷಿಣೆ ವಿತರಣೆ – ರಾತ್ರಿ 9:00 ಗಂಟೆಗೆ
ಪಡಗದ ಪೂಜಾ – ರಾತ್ರಿ 9:30 ಗಂಟೆಗೆ ಸಾರಂಗಮಠದಲ್ಲಿ
ಗಂಗಾದೇವಿ ಪೂಜಾ – ಬೆಳಗಿನ ಜಾವ 4:00 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)
ಶ್ರೀ ದೇವಿಗೆ ಪ್ರಸಾದ ಕೇಳುವುದು – ಬೆಳಗಿನ ಜಾವ 4:30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)
ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ – ಬೆಳಗಿನ ಜಾವ ದ್ವಾದಶ 5:30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ)
ಇದು ನಂಬಿಕೆ, ಶ್ರದ್ಧೆ ಮತ್ತು ಶುದ್ಧ ಭಕ್ತಿಯ ದಿನ. ಈ ಮಹತ್ವಪೂರ್ಣ ಕ್ಷಣಗಳಲ್ಲಿ ನೀವು ಸಹ ಕುಟುಂಬದೊಂದಿಗೆ ಭಾಗವಹಿಸಿ, ಪವಿತ್ರತೆಯನ್ನು ಅನುಭವಿಸಿ.
ದಿನಾಂಕ 24-05-2025 🙏ಅಗ್ನಿಕುಂಡ ಪೂಜೆ
ಪ್ರಿಯ ಭಕ್ತಮಿತ್ರರೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಅಂಗವಾಗಿ, ದಿನಾಂಕ: 24-05-2025 (ಶನಿವಾರ) ರಂದು ದ್ವಾದಶಿ ನಸುಕಿನಲ್ಲಿ ಅಗ್ನಿಕುಂಡ ಪೂಜೆ ಜರುಗಲಿದೆ. ಶುದ್ಧತಾ ಯಜ್ಞವಾಗಿ ಬೆಳಗಿನ ಶುಭ ಮುಹೂರ್ತದಲ್ಲಿ ಅಗ್ನಿಕುಂಡದಲ್ಲಿ ಹವನ ಕಾರ್ಯಕ್ರಮ ನಡೆಯುತ್ತದೆ.
📅 ದಿನಾಂಕ: 24-05-2025 (ಶನಿವಾರ)
🕡 ಸಮಯ: ಬೆಳಗಿನ ಜಾವ 6:30 ಗಂಟೆಗೆ (ದ್ವಾದಶಿ ನಸುಕಿನಲ್ಲಿ)
📍 ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
ಈ ಪವಿತ್ರ ಯಜ್ಞದಲ್ಲಿ ಭಾಗವಹಿಸಿ, ಆತ್ಮಶುದ್ಧಿ ಮತ್ತು ದೇವಿಯ ಕೃಪೆಯನ್ನು ಪಡೆದುಕೊಳ್ಳಿ. ನಿಮ್ಮೆಲ್ಲರ ಉಪಸ್ಥಿತಿಗೆ ನಮ್ಮ ಆತ್ಮೀಯ ಸ್ವಾಗತ.
ದಿನಾಂಕ 17-06-2025 🙏 ಕಂಕಣ ವಿಸರ್ಜನಾ ಕಾರ್ಯಕ್ರಮ
ಪ್ರಿಯ ಭಕ್ತಮಿತ್ರರೆ,
ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ 2025ರ ಸಮಾರೋಪದ ಅಂಗವಾಗಿ, 17-06-2025 (ಮಂಗಳವಾರ) ರಂದು ರಾತ್ರಿ 8:00 ಗಂಟೆಗೆ ಶ್ರೀ ದೇವಿಯವರ ಕಂಕಣ ವಿಸರ್ಜನಾ ಕಾರ್ಯವು ಶ್ರದ್ಧಾ ಭಕ್ತಿಗಳಿಂದ ನೆರವೇರಲಿದೆ.
ದಿನಾಂಕ: 17-06-2025 (ಮಂಗಳವಾರ)
ಸಮಯ: ರಾತ್ರಿ 8:00 ಗಂಟೆಗೆ
ಸ್ಥಳ: ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ
ಈ ಪವಿತ್ರ ಸಮಾರಂಭದಲ್ಲಿ ಭಾಗವಹಿಸಿ, ಅಮೃತ ಅನುಭವವನ್ನು ಪಡೆದು ದೇವಿಯ ಕೃಪೆಗೆ ಪಾತ್ರರಾಗಿರಿ. ಈ ದೈವಿಕ ಕ್ಷಣಕ್ಕೆ ನಿಮ್ಮನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತೇವೆ
-:ವಿಶೇಷ ಸೂಚನೆ:-
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ರೈಲ್ವೆ ಮುಖಾಂತರ ಬರತಕ್ಕ ಭಕ್ತಾದಿಗಳು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಬರಬೇಕೆಂದು ವಿನಂತಿಸಲಾಗಿದೆ.
- ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೊಸ್ಕರ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
- ದೇವಸ್ಥಾನದಲ್ಲಿ ಭಕ್ತಾದಿಗಳಿಗೊಸ್ಕರ ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದವನ್ನು ದಾಸೋಹ ಭವನದಲ್ಲಿ ವ್ಯವಸ್ಥೆ ಇರುತ್ತದೆ.
- ಭಕ್ತಾಧಿಗಳು ಅನ್ನ ದಾಸೋಹ ಸೇವೆ ಮಾಡಲು ಇಚ್ಛಿಸುವವರು ಸಾಮಾನ್ಯ ದಿನ - ರೂ. 11,000/- ಮಂಗಳವಾರ/ ಶುಕ್ರವಾರ ರೂ. 30,000/- ಹುಣ್ಣಿಮೆದಿನದಂದು – ರೂ. 99,000/- ಗಳ ಮೊತ್ತವನ್ನು ಪಾವತಿಸಿ ರಸೀದಿಯನ್ನು ಪಡೆಯಬೇಕೆಂದು ವಿನಂತಿಸಲಾಗಿದೆ.
- ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನು ಮನದಿಂದ ದೇಣಿಗೆ ನೀಡಲು ಕೋರಿದೆ.
- ಶ್ರೀ ದೇವಿಗೆ ಸಲ್ಲಿಸುವ ಮುಡುಪು, ಕಾಣಿಕೆ, ಬೆಳ್ಳಿ, ಬಂಗಾರ ಹಾಗೂ ದವಸ ದಾನ್ಯಗಳನ್ನು ದೇವಸ್ಥಾನದ ಕಛೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿ ನಿಧಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ಶ್ರೀ ದೇವಿಯ ನಿಧಿಗೆ ಸೇರುವುದಿಲ್ಲ.
- ಪ್ರಾಣಿಬಲಿ ನಿಷೇಧ ಕಾಯಿದೆ 1959 ಮತ್ತು 1963ರ ಪ್ರಕಾರ ಪ್ರಾಣಿಬಲಿಯನ್ನು ನಿಷೇಧಿಸಿದೆ. ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು.
- ದೇವಸ್ತಾನದ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿದೆ.
- ಮೇಲಿನಂತೆ ಜರುಗುವ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ದೇವಸ್ಥಾನದಲ್ಲಿನ ವಿಶೇಷ ಸೌಲಭ್ಯಗಳ ಮಾಹಿತಿ
ಜಾತ್ರೆಯಲ್ಲಿ ಭಕ್ತರಿಗೆ ಉಪಯುಕ್ತವಾಗುವ ಎಲ್ಲ ಸೌಲಭ್ಯಗಳ ಮಾಹಿತಿಗಾಗಿ ಕೆಳಗಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
